ಭೂಮಿ ತಾಯಿಯ ಚೊಚ್ಚಲ ಮಗ ರಾಜೇಂದ್ರ ಸಿಂಗ್ ಬಾಬು ಅವರು ಬರೆದು ನಿರ್ದೇಶಿಸಿದ 1998ರ ಕನ್ನಡ ಚಲನಚಿತ್ರ. ಚಿತ್ರದ ಹೆಸರು ವರಕವಿ ದ ರಾ ಬೇಂದ್ರೆ ಅವರ ಅದೇ ಹೆಸರಿನ ಕವಿತೆಯಿಂದ ಪ್ರೇರಿತವಾಗಿದೆ. ಇದರಲ್ಲಿ ಶಿವ ರಾಜ್‌ಕುಮಾರ್ , ರಮೇಶ್ ಅರವಿಂದ್ , ವಿಜಯಲಕ್ಷ್ಮಿ , ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ . ಈ ಚಿತ್ರಕ್ಕೆ ವಿ. ಮನೋಹರ್ ಅವರು ಸಂಗೀತ ಸಂಯೋಜಿಸಿದ್ದರೆ. ಈ ಚಿತ್ರದಲ್ಲಿ ಲೋಕೇಶ್ ಅವರು ನಟಿಸಿದ ಕಲ್ಲಣ್ಣನ ಪಾತ್ರವು ಬಿಹಾರದ ದಶರಥ ಮಾಂಜಿಯವರಿಂದ ಪ್ರೇರಿತವಾಗಿದೆ. ನಿಜ ಜೀವನದಲ್ಲಿ ದಶರಥ ಮಾಂಜಿಯವರು ತಮ್ಮ ಮಡಿದ ಹೆಂಡತಿಯ ನೆನಪಿಗಾಗಿ 22 ವರ್ಷಗಳ ಕಾಲ ಕಲ್ಲಿನ ಬೆಟ್ಟವನ್ನು ಕಡಿದು , ರಸ್ತೆ ನಿರ್ಮಿಸಲು ಶ್ರಮಿಸುತ್ತಾರೆ. ಈ ಚಿತ್ರದಲ್ಲಿ ಗ್ರಾಮಕ್ಕೆ ಅಣೆಕಟ್ಟು ನಿರ್ಮಿಸಲು ಕಲ್ಲಣ್ಣನು ಬೆಟ್ಟ ಕಡಿಯುತ್ತಿರುತ್ತಾನೆ. ಭಾರಿ ಸಾಲಗಳಿಂದ ಹೊರೆಯಾಗಿರುವ ರೈತರ ದುಃಸ್ಥಿತಿ , ಬೆಳೆ ವೈಫಲ್ಯದಿಂದಾಗಿ ಉತ್ತರ ಕರ್ನಾಟಕದಲ್ಲಿ ಆದ ರೈತರ ಆತ್ಮಹತ್ಯೆಗಳು ಈ ಚಿತ್ರದ ಕಥಾವಸ್ತು. ಶಿವ ರಾಜ್‌ಕುಮಾರ್ ಹಾಗು ರಮೇಶ್ ಅರವಿಂದ್ ಅವರ ನೈಜ ನಟನೆಗೆ ಬಹಳ ಮೆಚ್ಛುಗೆ ಪಡೆದಿದೆ. == ಪಾತ್ರವರ್ಗ == ಶಿವ ರಾಜ್‌ಕುಮಾರ್ ಕರ್ಣನಾಗಿ ಭರತ್ ಕುಮಾರ್ ಆಗಿ ರಮೇಶ್ ಅರವಿಂದ್ ಸಪ್ನಾ ಸಾಗರ್ ಆಗಿ ವಿಜಯಲಕ್ಷ್ಮಿ ನಿಲಾಂಬಿಕಾ ಪಾತ್ರದಲ್ಲಿ ಶಿಲ್ಪಾ ಚನ್ನಬಸಪ್ಪನಾಗಿ ಸಬಿಯಾಸಾಚಿ ಚಕ್ರವರ್ತಿ ಕಲ್ಲಣ್ಣ ಪಾತ್ರದಲ್ಲಿ ಲೋಕೇಶ್ ಪಾಟೀಲ್ ಆಗಿ ರಂಗಾಯಣ ರಘು ಗಿರಿಜಾ ಲೋಕೇಶ್ ಗ್ರಾಮಸ್ಥರಾಗಿ ಗುರುಬಸ್ಯ ಪಾತ್ರದಲ್ಲಿ ಶಂಕರ್ ಅಶ್ವತ್ ಗ್ರಾಮಸ್ಥನಾಗಿ ಕರಿಬಸವಯ್ಯ ಎಂ.ಎಸ್.ವಾಸುದೇವ ರಾವ್ ಸಿ.ಎಸ್.ನರಸಿಂಹ ಮೂರ್ತಿಯಾಗಿ ಜಿ.ಕೆ ಗೋವಿಂದ ರಾವ್ ಮುಖ್ಯಮಂತ್ರಿಯಾಗಿ ಹೊನ್ನವಳ್ಳಿ ಕೃಷ್ಣ ಕೃಷ್ಣನಾಗಿ == ಸಂಗೀತ == ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. == ಪ್ರಶಸ್ತಿಗಳು == 1998-99 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಾಮಾಜಿಕ ಕಾಳಜಿಯ ವಿಶೇಷ ಚಲನಚಿತ್ರ ಅತ್ಯುತ್ತಮ ಕಥೆಗಾರ - ರಾಜೇಂದ್ರ ಸಿಂಗ್ ಬಾಬು ಅತ್ಯುತ್ತಮ ಸಂಭಾಷಣೆ ಬರಹಗಾರ - ಎಸ್.ಸುರೇಂದ್ರನಾಥ್ == ಬಾಹ್ಯ ಲಿಂಕ್‌ಗಳು ==